
5th October 2025
ಕುಷ್ಟಗಿ : ಸೌರಭ ಸಾಂಸ್ಕೃತಿಕ ಕಲಾ ಬಳಗ ಹಿರೇಮನ್ನಾಪುರ ಸಂಘದ ಪ್ರಥಮ ಸಭೆಯು ಶುಕ್ರವಾರ ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದ ಶ್ರೀ ಶ್ಯಾಮೀದಲಿ ದರ್ಗಾದಲ್ಲಿ ಜರುಗಿತು.
ಸಭೆಯಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸೌರಭ ಸಾಂಸ್ಕೃತಿಕ ಕಲಾ ಬಳಗದ ಗೌರವಾಧ್ಯಕ್ಷರನ್ನಾಗಿ ಹಿರಿಯರಾದ ಹಾಗೂ ರಂಗ ನಿರ್ದೇಶಕರಾದ ಹಿರೇಹುಸೇನಸಾಬ್ ಕೋಳೂರು ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರೆಹಮಾನಸಾಬ್ ಕೋಳೂರು, ಹಾಗೂ
ಉಪಾಧ್ಯಕ್ಷರಾಗಿ ನಮ್ಮ ತುಂಗಾಕಿರಣ ಪತ್ರಿಕೆಯ ಕುಷ್ಟಗಿ ತಾಲೂಕಾ ವರದಿಗಾರರಾದ ಭೀಮಸೇನರಾವ್ ಕುಲಕರ್ಣಿ ಇವರನ್ನು ಆಯ್ಕೆ ಮಾಡಲಾಯಿತು. ಅದರಂತೆ ಕಾರ್ಯದರ್ಶಿಯಾಗಿ ಶ್ರೀಮತಿ ಫೈಮುನ್ನಿಸಾ ಕೋಳೂರು, ಸಹ ಕಾರ್ಯದರ್ಶಿಯಾಗಿ ಬಾಳನಗೌಡ ಕನ್ನಾಳ್, ಸಂಘಟನ ಕಾರ್ಯದರ್ಶಿಯಾಗಿ ಹನುಮಣ್ಣ ಗೌಡ್ರ, ಖಜಾಂಚಿಯಾಗಿ ಹುಸೇನಭಾಷಾ ಮುಜಾವರ್, ಹಾಗೂ ಸಂಘದ ಸದಸ್ಯರನ್ನಾಗಿ ಶರಣಗೌಡ ಪೋಲಿಸ್ ಪಾಟೀಲ್, ಮಾನಪ್ಪ ಹಳ್ಳಿ , ರಾಜಮೊಹಮ್ಮದ ದಲಾಯತ್, ಸುನೀಲಕುಮಾರ್ ಮಧುಕರ್, ಬಷೀರ್ ಅಹಮ್ಮದ್ ಸಾಬಾದ್, ವಿರುಪಾಕ್ಷಪ್ಪ ದೇಸಾಯಿ, ಮುದಕಪ್ಪ ಕಲ್ಮಂಗಿ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾದ ಭೀಮಸೇನರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ಬದಕಿನ ಸಂಗೀತದ ಉದ್ದೇಶವನ್ನು ಉಳಿಸಿ ಬೆಳೆಸುವ ಬಗ್ಗೆ ಹಾಗೂ ಸಂಘದ ಉದ್ದೇಶಗಳ ಕುರಿತು ಮಾತನಾಡಿದರು.
ಗೌರವಾಧ್ಯಕ್ಷರಾದ ಹಿರೇಹುಸೇನಸಾಬ ಕೋಳೂರು ಮಾತನಾಡಿ, ಭಜನಾಪದ, ಲಾವಣಿ ಪದ, ತತ್ವಪದ, ದಾಸರಪದ ಮತ್ತು ಕರೋಕೆ ಹಾಡಿನ ಜೊತೆಗೆ ಇನ್ನಿತರ ಪದಗಳನ್ನು ಹಾಡುವುದಲ್ಲದೇ ಸಂಘದ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹಾಡುವ ಅವಕಾಶ ಕೊಟ್ಟು ಒಬ್ಬ ಕಲಾವಿದರನ್ನಾಗಿ ಮಾಡುವ ಕೆಲಸವಾಗಬೇಕು. ನಿಜಗುಣಿ ಶಿವಯೋಗಿಗಳ ಹಾಡುಗಳನ್ನು ಹಾಡುವ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಇದಕೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
ಅಧ್ಯಕ್ಷರಾದ ರೆಹಮಾನಸಾಬ್ ಕೋಳೂರು ಮಾತನಾಡಿ ಸಂಗೀತವು ಎಲ್ಲರ ಆರೋಗ್ಯದ ಮಾರ್ಗವಾಗಿದ್ದು ಎಲ್ಲರೂ ಇದರ ಬಗ್ಗೆ ಆಸಕ್ತಿಯಿಂದ ಭಾಗವಹಿಸಬೇಕು. ಸರ್ಕಾರದಿಂದ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಹಿರೇಹುಸೇನಸಾಬ್ ಕೋಳೂರು, ಅಧ್ಯಕ್ಷರಾದ ರೆಹಮಾನಸಾಬ್ ಕೋಳೂರು, ಉಪಾಧ್ಯಕ್ಷರಾದ ಭೀಮಸೇನರಾವ್ ಕುಲಕರ್ಣಿ, ಸಹ ಕಾರ್ಯದರ್ಶಿ ಬಾಳನಗೌಡ ಕನ್ನಾಳ್, ಸಂಘಟನ ಕಾರ್ಯದರ್ಶಿ ಹನುಮಣ್ಣ ಗೌಡ್ರ, ಖಜಾಂಚಿ ಹುಸೇನಭಾಷಾ ಮುಜಾವರ್, ಸದಸ್ಯರಾದ ಶರಣಗೌಡ ಪೋಲಿಸ್ ಪಾಟೀಲ್, ಮಾನಪ್ಪ ಹಳ್ಳಿ , ವಿರುಪಾಕ್ಷಪ್ಪ ದೇಸಾಯಿ, ಮುದಕಪ್ಪ ಕಲ್ಮಂಗಿ ಹಾಗೂ ಇತರರಿದ್ದರು.
ವರದಿಗಾರರು: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಸೌರಭ ಸಾಂಸ್ಕೃತಿಕ ಕಲಾ ಬಳಗ ಹಿರೇಮನ್ನಾಪುರ ಸಂಘದ ಮೊದಲನೇ ಸಭೆಯು ಶುಕ್ರವಾರ ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದ ಶ್ರೀ ಶ್ಯಾಮೀದಲಿ ದರ್ಗಾದಲ್ಲಿ ಜರುಗಿತು. ಸಭೆಯಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆ
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ